Monday, March 31, 2014

2007....... 1 . ಬಿನ್ನಹ.....

ಕೆರೆಗೆ ಕಲ್ಲೆಸೆದಾಗ ಸುಳಿದೆದ್ದ  ಪರಿಧಿಯೊಲು,  
ಮನಸು ಚಿಂತಿಸಿದಾಗ ನಾ ಬರೆದ ಬರಹವಿದು.  
ತಪ್ಪಾದರೂ ಸರಿಯೇ , ಒಪ್ಪಾದರೂ ಸರಿಯೇ,       
ತಪ್ಪಿಲ್ಲದಾ ಮತಿಯ ಕರುಣಿಸೋ ಶ್ರೀಹರಿಯೇ !!  

2007....... 2 . ಆಸೆ  

ನಾನೊಲ್ಲೆ ವೈಭೋಗ, ಸಾಕೆನ್ನ ಬರವಣಿಗೆ, 
ನನಗೀಗ ಬೇಕಿಹುದು, ಬರಹದಾ ಮೆರವಣಿಗೆ. 
ನಿದ್ದೆ ಬರದಾ ನಿಲುವು ಕಂಡ ಆ ಮರುಘಳಿಗೆ,  
ಲೇಖನಿಯು ನರ್ತಿಸಲಿ ಕಾಗದದಲರೆಘಳಿಗೆ....  




12 comments:

  1. ತುಂಬಾ ಇಷ್ಟ ಆದ್ವು. ಹೀಗೇ ನರ್ತಿಸುತಿರಲಿ ನಿಮ್ಮ ಪದಗಳು, ಅದರೊಳಗಿನ ಭಾವಗಳು. ಹಾಡಾಗಲಿ ಭಾವದೊಳಗಣ ದನಿ... ನಿರಂತರ...

    ReplyDelete
  2. ಅಕ್ಕ ಮೊದಲ ಓವರಲ್ಲೇ ಎರಡು ಬೌಂಡ್ರಿ ಬಾರಿಸಿದ ಕವನಗಳು...ಲೇಖನಿ ಕನಿಸಲಿ ನಲಿಸಲಿ ಬ್ಲಾಗಿಗರ..ಹೀಗೇ...

    ReplyDelete
  3. ಸುಂದರ ಸರಳ ಶೈಲಿ ನಿಮ್ಮದು! ನಿಮ್ಮ ಈ ಬುತ್ತಿ ನಮ್ಮ ನೆನಪಿನ ಬುತ್ತಿಯ ಗಂಟನೂ ಬಿಡಿಸಿ ಒಳ ಹೊಕ್ಕು ತಿರುಗಿ ಉಣಬಡಿಸಿ ಮನ ತಣಿಸುತ್ತದೆ ಎಂದರೆ ಅತಿಶಯವಲ್ಲ! :)

    ReplyDelete
  4. ಮೂವರಿಗೂ ನನ್ನ ಧನ್ಯವಾದಗಳು .... ಉಪೇಂದ್ರ, Azad ಮತ್ತು ಸುರೇಶ್ !!!

    ReplyDelete
  5. ತುಂಬಾ ಚೆನ್ನಾಗಿರುವ ಬ್ಲಾಗ್ ಮಾಡಿದ್ದೀರಾ ಹರಿಣಿಯಕ್ಕಾ..ಕವನಗಳ ರಸಧಾರೆ ಹರಿಯಲಿ....

    ReplyDelete
  6. Sogasaada kavana madam chikkadaagi chokkavaagide :)

    ReplyDelete
  7. ಸ್ವಾಗತ ಬ್ಲಾಗ್ ಲೋಕಕ್ಕೆ :) :)

    ReplyDelete
  8. ಸಾಕು ಸಾಕೆನುತಲೇ ಸಾರ್ಥಕ ಕವನವನಿತ್ತ ನಿಮಗಿದೋ ನನ್ನ ನಮನ..

    ReplyDelete
  9. ಕಾಗದಲ್ಲಿ ಅರೆಘಳಿಗೆ ನರ್ತಿಸಲಿ ಎನ್ನುತ್ತಲೇ ಬ್ಲಾಗಿನಲ್ಲಿ ನರ್ತಿಸುವಂತೆ ಮಾಡಿದಿರಿ ನಿಮ್ಮ ಬರಹವನ್ನು. ಕಾರಣಾಂತರಗಳಿಂದ ಕೆಲಕಾಲ ಬ್ಲಾಗ್ ಲೋಕದಲ್ಲಿ ಸುತ್ತಾಡಲು ಆಗಿರಲಿಲ್ಲ. ಹಾಗಾಗಿ ನಿಮ್ಮ ಬ್ಲಾಗನ್ನು ತಡವಾಗಿ ನೋಡುತ್ತಿದ್ದೇನೆ. ಬ್ಲಾಗು ಹೊಸದೇ ಹೊರತು ನೀವು ಹೊಸಬರಲ್ಲ, ನಿಮ್ಮ ಬರಹವೂ :) ಪಕ್ಕದಲ್ಲೇ ಕುಳ್ಳಿರಿಸಿಕೊಂಡು, ನೋಡಿದ/ಸುತ್ತಿದ ಊರುಕೇರಿಗಳನ್ನೆಲ್ಲಾ ಕತೆಕತೆಯಾಗಿ ವರ್ಣಿಸುವ ಸೊಗಸಾದ, ಸರಳವಾದ, ಆಪ್ತವಾದ ನಿಮ್ಮ ಶೈಲಿಗೆ ಮಾರುವೋದೆ.

    ReplyDelete
  10. ನಿಮ್ಮೆಲ್ಲರ ಸ್ಫೂರ್ತಿಯ ಮಾತುಗಳಿಗೆ ಧನ್ಯವಾದ :)

    ReplyDelete