Friday, April 4, 2014

ಚೌಪದಿಗಳು

2008  --  7 . ಬನ್ನೇರುಘಟ್ಟ Time pass  !!  
ಹಿತ್ತಲಲಿ ನಾ ಕುಳಿತು ಎಣಿಸಿದ್ದೆ ಸೀಬೆಫಲ, 
ಹತ್ತು ದಿನಗಳ ಬಳಿಕ ಕೀಳಬಹುದೆಂದು.
ಅಳಿಲು ಬರದಿರಲೆಂದು ಚೀಲಗಳ ನಾ ಕಟ್ಟೆ, 
ಟೊಂಗೆ ಮುರಿದಾ ಮಂಗಕುಪಹಾರವಾಯ್ತಿಂದು !! 

2013  --  8.  ಶ್ವಾನ - ಶಾಪ 
ಎಲ್ಲರೊಲುಮೆಯ ಅತಿಥಿ ಬಂದಿತ್ತು ಶ್ವಾನ 
ಪುಟಿಪುಟಿದು ಓಡುತ್ತ ಬಾಲವನ್ನಾಡಿಸುತ 
ದೊಡ್ಡದಾಗುತ್ತಲೇ ಸಿಕ್ಕದ್ದು ಕಚ್ಚಿರಲು 
ಶ್ವಾನವಿತ್ತವಗೆ ನಾ ಹಾಕಿದೆನು ಶಾಪ ! 

1 comment:

  1. ಚೌಪದಿಗಳು ಚೆನ್ನಾಗಿವೆ ಹರಿಣಿಯವರೇ, ಅಭಿನ೦ದನೆಗಳು, ನನ್ನ ಬ್ಲಾಗ್ ಗೆ ಸ್ವಾಗತ.

    ReplyDelete